ಒಂದೇ ಸ್ತಳದಲ್ಲಿ ಒಂದೇ ದಿನಕ್ಕೆ ಎರಡು ಮದುವೆಗಳು ಬುಕ್ ಅದಾಗ ಎರಡೂ ಹೆಣ್ಣಿನ ಕಡೆಯ ಕುಟುಂಬಗಳು ಈ ಅಮೂಲ್ಯ ಕ್ಷಣವನ್ನು ಕಾಪಾಡಿಕೊಳ್ಳುವ ಇಕ್ಕಟ್ಟಿನ ಪರಿಸ್ಥಿತಿಗೆ ಒಳಗಾಗುತ್ತವೆ. ಈ ಹಾಸ್ಯಮಯ ಗದ್ದಲದಲ್ಲಿ ಒಂದು ವಧುವಿನ ತಂದೆ ಹಾಗು ಇನ್ನೊಂದು ವಧುವಿನ ಅಕ್ಕ ತಮ್ಮವರ ಅಮೂಲ್ಯ ಕ್ಷಣವನ್ನು ಕಾಪಾಡಿಕೊಳ್ಳಲು ಒಬ್ಬೊರು ಇನ್ನೊಬ್ಬರಿಗೆ ಎದುರಾಗಿ,ಯಾವುದಕ್ಕೂ ಅಂಜದೆ ಮದುವೆಯನ್ನು ನೆರವೇರಿಸಲು ಸಜ್ಜಾಗುತ್ತಾರೆ.